ತಪ್ಪಿತಾ ಮತ್ತೊಂದು ಸ್ಫೋಟಕ ದುರಂತ!?; ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಫೋಟಕ ಸಾಮಗ್ರಿ ವಶಕ್ಕೆ..

Sunday, 28 Feb, 9.01 pm

ಬೆಳಗಾವಿ: ಕೆಲವೇ ದಿನಗಳ ಅಂತರದಲ್ಲಿ ಸಂಭವಿಸಿದ್ದ ಎರಡು ಭಯಂಕರ ಸ್ಫೋಟದ ದುರಂತಗಳ ಬೆನ್ನಿಗೇ ಪೊಲೀಸರು ಭಾರಿ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆ ಮೂಲಕ ಸಂಭಾವ್ಯ ಸ್ಫೋಟ ಪ್ರಕರಣವೊಂದನ್ನು ಪೊಲೀಸರು ತಪ್ಪಿಸಿದಂತಾಗಿದೆ ಎಂದರೂ ಅತಿಶಯೋಕ್ತಿಯೇನಲ್ಲ.

ತಿಂಗಳ ಹಿಂದೆ ಶಿವಮೊಗ್ಗದಲ್ಲಿ ಭಾರಿ ಸ್ಫೋಟ ಸಂಭವಿಸಿ ಆರು ಮಂದಿ ಸಾವಿಗೀಡಾಗಿದ್ದರು. ಅದಾದ ಕೆಲವೇ ದಿನಗಳಲ್ಲಿ ಚಿಕ್ಕಬಳ್ಳಾಪುರದಲ್ಲೂ ಸ್ಫೋಟಕ ಸಾಮಗ್ರಿಗಳು ಸಿಡಿದು ಭಾರಿ ಸಾವು-ನೋವು ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ರಾಜ್ಯಾದ್ಯಂತ ಸ್ಫೋಟಕ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದು, ಇದೀಗ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ತೋಟದಲ್ಲಿ ಸಂಗ್ರಹಿಸಿದ್ದ ಸ್ಪೋಟಕ ಹಾಗೂ ಭಾರಿ ಪ್ರಮಾಣದ ಜಿಲೆಟಿನ್ ವಶಪಡಿಸಿಕೊಂಡಿದ್ದಾರೆ.