ನೀವೂ ಬಿಗ್​ಬಾಸ್​ ಮನೆಯೊಳಗೆ ಹೋಗಬಹುದು! ಇಲ್ಲಿದೆ ನೋಡಿ ಅವಕಾಶ

Sunday, 28 Feb, 8.38 pm

ಬೆಂಗಳೂರು: ಕನ್ನಡದ ಅತ್ಯಂತ ಪ್ರಸಿದ್ಧ ರಿಯಾಲಿಟಿ ಶೋ ಬಿಗ್​ಬಾಸ್​ನ ಸೀಸನ್​ 8 ಇಂದಿನಿಂದ ಆರಂಭವಾಗಿದೆ. ಅಯ್ಯೋ ಈ ಬಾರಿ ಸೆಲೆಬ್ರಿಟಿಗಳನ್ನು ಮಾತ್ರ ಆಯ್ಕೆ ಮಾಡಿದ್ದಾರೆ.. ಇಲ್ಲವೆಂದಿದ್ದರೆ ನಾನೂ ಹೋಗೋದಕ್ಕೆ ಟ್ರೈ ಮಾಡ್ತಿದ್ದೆ ಎನ್ನುವ ಬೇಜಾರಲ್ಲಿದ್ದೀರಾ? ಚಿಂತೆ ಬೇಡ.. ಇಲ್ಲಿದೆ ನೋಡಿ ಅವಕಾಶ..

ಹೌದು. ಅಂತದ್ದೊಂದು ಅವಕಾಶವನ್ನು ಕಲರ್​ ಕನ್ನಡ ವಾಹಿನಿ ಮಾಡಿಕೊಟ್ಟಿದೆ. ನೀವು ಕುಳಿತ ಜಾಗಕ್ಕೇ ಬಿಗ್​ಬಾಸ್​ ಮನೆ ಬರಲಿದೆ. ತಂತ್ರಜ್ಞಾನದ ಮೂಲಕ ಅದಕ್ಕೆ ಅವಕಾಶ ಮಾಡಿಕೊಡಲಾಗಿದೆ..

ಪೂರ್ತಿ ಬಿಗ್​ಬಾಸ್​ ಮನೆಯ 3ಡಿ ನೋಟವನ್ನು ಕಲರ್ಸ್​ ಕನ್ನಡ ತಯಾರಿಸಿದೆ. ಅದನ್ನು ನಿಮ್ಮೆಲ್ಲರಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಬಿಗ್​ಬಾಸ್​ ಮನೆ ಹೇಗಿದೆ? ನೀವು ಮನೆಯ ಒಳಗೆ ಹೋಗುತ್ತಿದ್ದರೆ ಯಾವ ರೀತಿಯ ಅನುಭವ ಆಗುತ್ತದೆ ಎನ್ನುವುದನ್ನು ನೀವು ಈ ಕೆಳಗಿನ ಲಿಂಕ್​ಗೆ ಹೋಗಿ ತಿಳಿದುಕೊಳ್ಳಬೇಡಿ.