ನಾಳೆಯಿಂದ ಸಾರ್ವಜನಿಕರಿಗೂ ಕರೊನಾ ಲಸಿಕೆ ಭಾಗ್ಯ- ಎಲ್ಲಿ? ಹೇಗೆ? ಯಾರಿಗೆ? ಇಲ್ಲಿದೆ ಮಾಹಿತಿ.

Sunday, 28 Feb, 8.37 pm

ಬೆಂಗಳೂರು: ಕರೊನಾ ಲಸಿಕೆ ಇದಾಗಲೇ ಭಾರತ ಪ್ರವೇಶಿಸಿ ಹಲವು ದಿನಗಳೇ ಕಳೆದಿವೆ. ಇದೀಗ ಕರ್ನಾಟಕಕ್ಕೂ ಕಾಲಿಟ್ಟು, ನಾಳೆಯಿಂದ (ಮಾರ್ಚ್‌1) ಸಾರ್ವಜನಿಕರ ಸೇವೆಗೂ ಲಭ್ಯ ಆಗಲಿದೆ. ಹಾಗಿದ್ದರೆ ಇದನ್ನು ಸದ್ಯ ಯಾರು ಪಡೆಯಬಹುದು? ಹೇಗೆ ಪಡೆಯಬೇಕು? ಎಲ್ಲಿ ಸಿಗಲಿದೆ ಇತ್ಯಾದಿ ಮಾಹಿತಿ ಇಲ್ಲಿದೆ ನೋಡಿ…

ದೇಶಾದ್ಯಂತ ನಾಳೆ ಬೆಳಗ್ಗೆ 9 ಗಂಟೆಯಿಂದ ನೋಂದಣಿ ಕಾರ್ಯಕ್ರಮ ಶುರುವಾಗಲಿದ್ದು, ಕರ್ನಾಟಕ ರಾಜ್ಯದ 200 ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತದೆ. ಸರ್ಕಾರಿ, ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಲಸಿಕೆ ವಿತರಣೆ ನಡೆಯಲಿದೆ. ಲಸಿಕೆ ಪಡೆಯ ಬಯಸುವವರಿಗೆ ಕೆಲವೊಂದು ಮಾರ್ಗಸೂಚಿ ನೀಡಲಾಗಿದೆ. ಅದನ್ನು ಪಾಲನೆ ಮಾಡಬೇಕು.

* ಕೊ-ವಿನ್ 2.0 ಆಯಪ್, ಆರೋಗ್ಯ ಸೇತು ಆಯಪ್‍ಗಳಲ್ಲಿ ಸ್ವಯಂ ನೋಂದಣಿ ಮಾಡಿಕೊಳ್ಳಬಹುದು ಅಥವಾ ಆನ್‍ಲೈನ್ ನೋಂದಣಿ ಮಾಡದವರು ಲಸಿಕಾ ಕೇಂದ್ರಗಳಲ್ಲಿ ರಿಜಿಸ್ಟರ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

* ಲಸಿಕೆ ಪಡೆಯಬಯಸುವವರು ರೇಷನ್ ಕಾರ್ಡ್, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ (ವೋಟರ್ ಐಡಿ) ಇವುಗಳನ್ನು ದಾಖಲೆ ರೂಪದಲ್ಲಿ ನೀಡಬೇಕು.