ಎಫ್​ಡಿಎ ಪರೀಕ್ಷೆ ಮುಗಿಸಿ ಹೋಗುವಾಗ ಎತ್ತಿಗೆ ಬೈಕ್​ ಗುದ್ದಿ ಯುವಕ ಸಾವು

Sunday, 28 Feb, 8.46 pm

ಬಾಗಲಕೋಟೆ: ಜೀವನದ ಬಗ್ಗೆ ಕನಸು ಕಟ್ಟಿಕೊಂಡು ಎಫ್​ಡಿಎ ಪರೀಕ್ಷೆ ಬರೆದ ಯುವಕನೊಬ್ಬ, ಮನಗೆ ಹೋಗುವಷ್ಟರಲ್ಲೇ ಅಪಘಾತಕ್ಕೀಡಾಗಿದ್ದು, ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆ ತೇರದಾಳ ಪಟ್ಟಣದ ಅಕ್ಷಯ್​ಕುಮಾರ್​ ಮೃತ ಯುವಕ. ಈತ ತನ್ನ ಸ್ನೇಹಿತನೊಂದಿಗೆ ಬಾಗಲಕೋಟೆಗೆ ಎಫ್ ಡಿಎ ಪರೀಕ್ಷೆ ಬರೆಯಲು ಬಂದಿದ್ದ. ಇಬ್ಬರು ಪರೀಕ್ಷೆ ಬರೆದು ಊರಿಗೆ ವಾಪಾಸಾಗಲು ಹೊರಟಿದ್ದಾರೆ. ಬೈಕ್​ನಲ್ಲಿ ಹೋಗುತ್ತಿದ್ದಾಗ, ಮುಧೋಳ ತಾಲೂಕಿನ ಲೋಕಾಪುರ ಬಳಿ ಎತ್ತೊಂದು ಅಡ್ಡ ಬಂದಿದ್ದು, ಅದಕ್ಕೆ ಬೈಕ್​ ಗುದ್ದಿದೆ. ಈ ಅಪಘಾತದಿಂದಾಗಿ ಅಕ್ಷಯಕುಮಾರ ಸಾವನ್ನಪ್ಪಿದ್ದಾನೆ. ಬೈಕಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಯುವಕನಿಗೆ ಗಂಭೀರ ಗಾಯವಾಗಿರುವುದಾಗಿ ತಿಳಿಸಲಾಗಿದೆ. ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.