ವಿಶ್ವ ಚಾಂಪಿಯನ್ ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದ ಭಾರತೀಯ ಕುಸ್ತಿ ಪಟು ವಿನೇಶ್ ಪೋಗಟ್

Sunday, 28 Feb, 8.35 pm

ಉಕ್ರೇನ್ : ಭಾರತದ ಮಹಿಳಾ ಕುಸ್ತಿ ಪಟು ವಿನೇಶ್ ಪೋಗಟ್ ಉಕ್ರೇನ್ ನಲ್ಲಿ ನಡೆದ ರೆಸ್ಲಿಂಗ್ (ಕುಸ್ತಿ) ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಅಮೋಘ ಸಾಧನೆ ಮಾಡಿದ್ದಾರೆ.

ಮಹಿಳಾ 53 ಕೆಜಿ ವಿಭಾಗದ ರಸ್ಲಿಂಗ್ ಸ್ಪರ್ಧೆಯಲ್ಲಿ ಭಾರತದ ಪರ ಸೆಣಸಿದ ಪೋಗಟ್, ಫೈನಲ್‍ನಲ್ಲಿ 2017ರ ವಿಶ್ವ ಚಾಂಪಿಯನ್ ಕುಸ್ತಿಪಟು ಕಲಾಡ್ಜಿನ್ಸ್ಕಾಯಾ ಅವರಿಗೆ ಸೋಲಿನ ರುಚಿ ತೋರಿಸಿ ಚಿನ್ನಕ್ಕೆ ಮುತ್ತಿಕ್ಕಿದರು.

ಪ್ರಾರಂಭದಲ್ಲಿ ವಿನೇಶ್ 4-0 ಅಂಕಗಳಿಂದ ಮುನ್ನಡೆ ಸಾಧಿಸಿದರು, ಆದರೆ ಎದುರಾಳಿ ಕಲಾಡ್ಜಿನ್ಸ್ಕೆ ತನ್ನ ಅದ್ಭುತ ಆಟದಿಂದ 4-4ರಿಂದ ಮೇಲುಗೈ ಸಾಧಿಸಿದರು. ನಂತರ ಜಾಣ್ಮೆಯ ಆಟಗಳನ್ನು ಪ್ರಯೋಗಿಸಿದ ಪೋಗಟ್ ಅಂತಿಮವಾಗಿ ಜಯದ ನಗೆ ಬೀರಿದರು.

ಇನ್ನು ವಿನೇಶ್ ಟೋಕಿಯೋದಲ್ಲಿ ನಡೆಯಲಿರುವ ಒಲಪಿಂಕ್ ಗೆ ತಯಾರಿ ನಡೆಸಿದ್ದಾರೆ.