ಬಿಗ್‌ ಬಾಸ್‌ ಮನೆಗೆ ಹತ್ತನೇ ಸ್ಪರ್ಧಿಯಾಗಿ ಹಾಸ್ಯ ನಟ ಪಾವಗಡ ಮಂಜು ಎಂಟ್ರಿ

Sunday, 28 Feb, 9.11 pm

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 8 ಕಾರ್ಯಕ್ರಮ ಶುರುವಾಗಿದ್ದು, ಮೊದಲ ಸ್ಫರ್ಧಿಯಾಗಿ ಮನೆಯೊಳಗೆ ಕಾಲಿಟ್ಟ ಧನುಶ್ರೀ ಹಾಗು ಎರಡನೇ ಸ್ಪರ್ಧಿಯಾಗಿ ಶುಭಪೂಂಜಾ ಹಾಗು ಮೂರನೇ ಸ್ಪರ್ಧಿಯಾಗಿ ಹಿರಿಯ ನಟ ಶಂಕರ್‌ ಅಶ್ವತ್‌ ನಾಲ್ಕನೇ ಸ್ಪರ್ಧೆಯಾಗಿ, ಗಾಯಕ ವಿಶ್ವ ಹಾಗೂ ಐದನೇ ಸ್ಪರ್ಧಯಾಗಿ ಕಿರುತೆರೆ ಜನಪ್ರಿಯ ನಟಿ ವೈಷ್ಣವಿ, ನಂತರ ಆರನೇ ಸ್ಪರ್ಧಿಯಾಗಿ ಬೈಕ್ ರೈಸರ್‌ ಅರವಿಂದ್ ಅವರು ಬಿಗ್ ಬಾಸ್‌ ಮನೆಗೆ ಕಾಲಿಟ್ಟರು. ಏಳನೇ ಸ್ಪರ್ಧಿಯಾಗಿ ನಟಿ ನಿಧಿ ಸುಬ್ಬಯ್ಯ, ಎಂಟನೇ ಸ್ಪರ್ಧಿಯಾಗಿ ಬ್ರೋ ಗೌಡ ಅಲಿಯಾಸ್ ಶಮಂತ್‌, ಒಂಬತ್ತನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಗೀತಾ ಹಾಗೂ ಹತ್ತನೇ ಸ್ಪರ್ಧಿಯಾಗಿ ಪಾವಗಡ ಮಂಜು ಅವರು ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ.